UPSC IES, ISS ಪರೀಕ್ಷೆ 2026 ಅಧಿಸೂಚನೆ ಪ್ರಕಟ; ಮಾರ್ಚ್ 3 ಅರ್ಜಿ ಕೊನೆಯ ದಿನ
ನವದೆಹಲಿ: ಕೇಂದ್ರ ಸರ್ಕಾರಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ ಬಂದಿದೆ. Union Public Service Commission ವತಿಯಿಂದ ಭಾರತೀಯ ಆರ್ಥಿಕ ಸೇವೆ (IES) ಹಾಗೂ ಭಾರತೀಯ ಸಾಂಖ್ಯಿಕ ಸೇವೆ (ISS) ಪರೀಕ್ಷೆ–2026ರ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ಆರ್ಥಿಕತೆ ಮತ್ತು ಅಂಕಿಅಂಶ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಪ್ರಮುಖ ಅವಕಾಶವಾಗಿದೆ.
ಆಯೋಗದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಫೆಬ್ರವರಿ 12, 2026ರಿಂದ ಆರಂಭವಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
-
ಅರ್ಜಿ ಪ್ರಾರಂಭ: ಫೆಬ್ರವರಿ 12, 2026
-
ಅರ್ಜಿ ಕೊನೆಯ ದಿನಾಂಕ: ಮಾರ್ಚ್ 3, 2026 (ಸಂಜೆ 6:00 ಗಂಟೆ)
-
ಲಿಖಿತ ಪರೀಕ್ಷೆ (ಅಂದಾಜು): ಜೂನ್ 19, 2026
ಹುದ್ದೆಗಳ ವಿವರ
ಒಟ್ಟು 44 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ತಿಳಿಸಲಾಗಿದೆ.
-
IES: 16 ಹುದ್ದೆಗಳು
-
ISS: 28 ಹುದ್ದೆಗಳು
ವಿದ್ಯಾರ್ಹತೆ
IES: ಅರ್ಥಶಾಸ್ತ್ರ, ಅನ್ವಯಿಕ ಅರ್ಥಶಾಸ್ತ್ರ, ಬಿಸಿನೆಸ್ ಎಕನಾಮಿಕ್ಸ್ ಅಥವಾ ಎಕನಾಮೆಟ್ರಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಅಗತ್ಯ.
ISS: ಸಂಖ್ಯಾಶಾಸ್ತ್ರ, ಗಣಿತದ ಅಂಕಿಅಂಶ ಅಥವಾ ಅನ್ವಯಿಕ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಹಂತದಲ್ಲಿ ಮುಖ್ಯ ವಿಷಯವಾಗಿರಬೇಕು.
ವಯೋಮಿತಿ & ಶುಲ್ಕ
-
ವಯಸ್ಸು: 21 ರಿಂದ 30 ವರ್ಷ (ಆಗಸ್ಟ್ 1, 2026 ಅನ್ವಯ)
-
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು: ₹200 ಶುಲ್ಕ
-
ಮಹಿಳಾ, SC/ST, PwBD ಅಭ್ಯರ್ಥಿಗಳಿಗೆ: ಸಂಪೂರ್ಣ ಶುಲ್ಕ ವಿನಾಯಿತಿ
ಆಯ್ಕೆ ಪ್ರಕ್ರಿಯೆ
-
ಲಿಖಿತ ಪರೀಕ್ಷೆ – 1000 ಅಂಕಗಳು
-
ಸಂದರ್ಶನ – 200 ಅಂಕಗಳು
ಅರ್ಜಿ ಸಲ್ಲಿಸುವ ವಿಧಾನ
-
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
-
One Time Registration (OTR) ಮಾಡಿ
-
ಲಾಗಿನ್ ಮಾಡಿ IES/ISS Exam 2026 ಆಯ್ಕೆ ಮಾಡಿ
-
ವೈಯಕ್ತಿಕ ಹಾಗೂ ವಿದ್ಯಾರ್ಹತೆ ವಿವರಗಳನ್ನು ಭರ್ತಿ ಮಾಡಿ
-
ದಾಖಲೆಗಳನ್ನು ಅಪ್ಲೋಡ್ ಮಾಡಿ
-
ಶುಲ್ಕ ಪಾವತಿಸಿ ಹಾಗೂ Submit ಮಾಡಿ
-
ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಉಳಿಸಿ
ಪರೀಕ್ಷೆಗೆ ಅರ್ಹರಾದವರಿಗೆ ಇ-ಪ್ರವೇಶ ಪತ್ರ ಪರೀಕ್ಷೆಗೆ ಮುನ್ನ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ. ಯಾವುದೇ ತಾಂತ್ರಿಕ ಸಮಸ್ಯೆ ಇದ್ದರೆ ಸಹಾಯವಾಣಿಯನ್ನು ಸಂಪರ್ಕಿಸಬಹುದು.
ದೇಶದ ಆರ್ಥಿಕ ಹಾಗೂ ಸಾಂಖ್ಯಿಕ ನೀತಿಗಳ ರೂಪಿಕರಣದಲ್ಲಿ ಮಹತ್ತರ ಪಾತ್ರ ವಹಿಸುವ ಈ ಸೇವೆಗಳಿಗೆ ಸೇರುವ ಅವಕಾಶ ಇದಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ತಮ್ಮ ತಯಾರಿಯನ್ನು ಆರಂಭಿಸುವುದು ಒಳಿತು.